"ಮನೆ ಬೀಗ ಮುರಿದು ಕಳ್ಳತನ" ಕುರಿತಾದ ಜಾಗೃತಿ ಕಿರುಚಿತ್ರ. #homesecurity #surveillance #burglary #Kallathana
December 2, 2022
1,555
53
2
3.54%
Search the Record
IndexedEvery word spoken in this episode is indexed. Type any phrase to jump straight to the moment it was said.
Type any word or phrase that may have been spoken. Click a result to seek the player to that exact moment.
Try a name, a topic, or a quoted line
Bengaluru City Police Episodes Around December 2, 2022
See what was published immediately before and after this episode.
7:27Now Playing"ಮನೆ ಬೀಗ ಮುರಿದು ಕಳ್ಳತನ" ಕುರಿತಾದ ಜಾಗೃತಿ ಕಿರುಚಿತ್ರ. #homesecurity #surveillance #burglary #Kallathana
YouTube Description
as posted by the channel1. ಅಪರಾಧ ಕೃತ್ಯ ನಡೆದಿದೆಯೆಂದು ದೂರುದಾರರಿಗೆ ಮನವರಿಕೆಯಾದಲ್ಲಿ ಕೃತ್ಯ ನಡೆದಿರುವ ಸ್ಥಳದಲ್ಲಿರುವ ಯಾವುದೇ ವಸ್ತುಗಳನ್ನು ಮುಟ್ಟಬಾರದು. ಸದರಿ ಕೃತ್ಯ ನಡೆದ ಸ್ಥಳವನ್ನು ಪೊಲೀಸರು ಬರುವವರೆಗೂ ಬೇರೆ ಯಾರೂ ಒಳಗೆ ಪ್ರವೇಶಿಸದಂತೆ ಎಚ್ಚರ ವಹಿಸಿ ಸಂರಕ್ಷಿಸಬೇಕು.
2. ಗಾಬರಿಗೊಳಗಾಗದೇ ಪೊಲೀಸ ಉಚಿತ ಸಹಾಯವಾಣಿ ನಮ್ಮ-112ಕ್ಕೆ ಕರೆ ಮಾಡಿ ಅಪರಾಧ ಕೃತ್ಯ ನಡೆದ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ವಿಳಾಸ ನೀಡುವುದು, ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಕೃತ್ಯ ನಡೆದ ಸ್ಥಳವನ್ನ ರಕ್ಷಣೆಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ.
3. ನಂತರ ಪೊಲೀಸರಿಗೆ ದೂರುದಾರರು ತಮ್ಮ ಮನೆಯಲ್ಲಿ ಸಿ.ಸಿ.ಟಿ.ವಿ ಅಳವಡಿಸಿದ್ದಲ್ಲಿ ಅದರ ಫೂಟೇಜ್ ಅನ್ನು ಪೊಲೀಸರಿಗೆ ಒದಗಿಸುವುದು. (ಕನಿಷ್ಠ ಒಂದು ತಿಂಗಳ ಸಿ.ಸಿ.ಟಿ.ವಿ ಬ್ಯಾಕ್ ಅಪ್ನ್ನು ಉಳಿಸಿಡತಕ್ಕದ್ದು).
4. ಅಪರಾಧ ಕೃತ್ಯ ಸ್ಥಳದಲ್ಲಿ ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ತಪಾಸಣೆಗೊಳಪಡಿಸುವುದರಿಂದ ಯಾವುದೇ ವಸ್ತುಗಳನ್ನ ಕದಡಬಾರದು.
5. ಬೆಲೆ ಬಾಳುವ ಚಿನ್ನಾಭರಣಗಳಿದ್ದಲ್ಲಿ, ದೊಡ್ಡ ಮೊತ್ತದ ನಗದು ಹಣವಿಟ್ಟುಕೊಂಡಲ್ಲಿ ಅವುಗಳನ್ನು ಬ್ಯಾಂಕ್ ಲಾಕರ್ಗಳಲ್ಲಿ ಇಟ್ಟುಕೊಂಡು, ಅತಿ ಅವಶ್ಯವೆನಿಸಿದಾಗ ತೆಗೆದುಕೊಳ್ಳುವುದು/ಬಳಸುವುದು.
6. ಮನೆಯಿಂದ ಬೇರೆಡೆ ಪ್ರವಾಸವಾಗಲಿ, ಸಂಬಂಧಿಕರ ಊರುಗಳಿಗೆ ದಿನಗಟ್ಟಲೇ ಹೋಗುವುದರ ಕುರಿತು ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಂ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದ ಕುರಿತು ಮಾಹಿತಿ ಹಂಚಿಕೊಂಡಲ್ಲಿ ಈ ರೀತಿಯ ಕೃತ್ಯಗಳಿಗೆ ಒಳಗಾಗುವ ಮೊದಲಿಗರು ನೀವಾಗಬಹುದು.
7. ದೂರುದಾರರು ಮನೆಮುರಿದು ಕಳ್ಳತನ ಆಗಿರುವ ಬಗ್ಗೆ ಈಖ ದಾಖಲಿಸುವಾಗ, ಯಾವುದೇ ಸದರಿ ಕೃತ್ಯ ನಡೆದಿರುವುದರ ಬಗ್ಗೆ ನಿದರ್ಿಷ್ಟ ಸಮಯದ ಖಾತರಿಯಿಲ್ಲದಿದ್ದಾಗ ಐಪಿಸಿ ಕಲಂ: 454, 457, 380 ಇದರ ಅಡಿಯಲ್ಲಿ ದೂರು ದಾಖಲು ಮಾಡಲಾಗುತ್ತದೆ.
Links & Promotions
Sentinel Indexing in Progress
Metadata and chapters are available. Claim extraction for this episode is pending.
All video content is delivered via YouTube embedded players in accordance with the YouTube Terms of Service. Sentinel provides research tools that promote discovery and accountability across political media.









